ಈ ಕೆಳಗಿನ ಬಟನ್‌ ಒತ್ತುವುದರ ಮೂಲಕ ನಮ್ಮ ಯುಟ್ಯೂಬ್‌ ಚಾನಲ್‌ಗೆ ಸಬ್‌ಸ್ಕ್ರೈಬ್‌ ಆಗಿರಿ

ಪ್ರಸ್ತುತ ನಮ್ಮ ಬ್ಲಾಗ್ನಲ್ಲಿ 8, 9ನೇ ತರಗತಿ ಕನ್ನಡ ಮಾಧ್ಯಮ ರಸಪ್ರಶ್ನೆಗಳು, 10ನೇ ತರಗತಿಯ ಕನ್ನಡ, ಇಂಗ್ಲಿಷ್‌, ಉರ್ದು ಮಾಧ್ಯಮ ರಸಪ್ರಶ್ನೆಗಳು, ಆಡಿಯೋ ಪಾಠಗಳು, ಅಭ್ಯಾಸ ಪತ್ರಿಕೆಗಳು, ನಕ್ಷಾ ರಸಪ್ರಶ್ನೆಗಳು, ಫಲಿತಾಂಶ ಸುಧಾರಣೆಗಾಗಿ ಕ್ರಿಯಾ ಯೋಜನೆ, ಸಮಾಜ ವಿಜ್ಞಾನ ಸಂಘದ ರಚನೆ ಮತ್ತು ಚಟುವಟಿಕೆಗಳು ಹಾಗೂ 10ನೇ ತರಗತಿಯ, 2015 ರಿಂದ ಎಲ್ಲಾ ಮಾರ್ಚ್‌ ವಾರ್ಷಿಕ ಹಾಗೂ ಜೂನ್‌ ಪೂರಕ ಪರೀಕ್ಷೆಯಲ್ಲಿನ ಪ್ರಶ್ನೆಗಳ ಹಾಗೂ ಕ ಪ್ರೌ ಶಿ ಪ ಮಂಡಳಿಯ ಮಾದರಿ ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರಶ್ನೆಗಳ ಘಟಕವಾರು ವಿಶ್ಲೇಷಣೆ ಹಾಗೂ 8, 9 ಮತ್ತು 10ನೇ ತರಗತಿಯ ಆನ್‌ಲೈನ್‌ ಸ್ವಮೌಲ್ಯಮಾಪನದ ರಸಪ್ರಶ್ನೆಗಳ ಲಭ್ಯ ಇವೆ. ಪ್ರತಿಬಿಂಬದಲ್ಲಿ ಬ್ಲಾಗ್ ಉದ್ಘಾಟನೆಯ ಕ್ಷಣಗಳನ್ನು ವೀಕ್ಷಿಸಬಹುದು.

Wednesday 27 May 2020

ನಮ್ಮ ಬಗ್ಗೆ


ಸಮಾಜ ವಿಜ್ಞಾನ ಡಿಜಿಟಲ್ ವೇದಿಕೆ, ಬಾಗಲಕೋಟ

“ಉನ್ನತ ಆಲೋಚನೆಗಳು ಎಲ್ಲೆಡೆಯಿಂದ ಹರಿದು ಬರಲಿ”, ಎಂಬ ‌ಮಾತಿನಂತೆ “ಸಮಾಜ ವಿಜ್ಞಾನ ‌‌ಡಿಜಿಟಲ್ ವೇದಿಕೆ, ಬಾಗಲಕೋಟ”, ಹತ್ತು ಹಲವು ವಿಚಾರಗಳನ್ನ ಹೊತ್ತ ಶಿಕ್ಷಕ ಬಳಗದ ಒಂದು ಫಲ ಎಂದರೆ ತಪ್ಪಾಗಲಾರದು. ಕರೋನ ಎಂಬ ಹೆಮ್ಮಾರಿ ಜಗತ್ತನ್ನು ಅಲ್ಲೋಲ ಕಲ್ಲೋಲ ಮಾಡಿದ ಈ ಕಾಲದಲ್ಲಿ ಶಾಲಾ ಕಾಲೇಜುಗಳು ರಜೆ ನೀಡಿರುವಾಗ ಕ್ರಿಯಾಶೀಲ ಶಿಕ್ಷಕರು ಸುಮ್ಮನಿರಲು ಸಾಧ್ಯವಿಲ್ಲ. ಎಂಬುದನ್ನ ನಮ್ಮ ತಂಡ ತೋರಿಸಿಕೊಟ್ಟಿದೆ.

ಕರೋನದಿಂದಾದ ಅನಾನುಕೂಲ ಪರಿಸ್ಥಿತಿಯನ್ನೇ ಅನುಕೂಲಕರವಾಗಿ ಬದಲಾಯಿಸಿಕೊಂಡು ಹೊಸ ಮನ್ವಂತರದೆಡೆ ಅಡಿ ಇಟ್ಟ ನಮ್ಮ ತಂಡದ ಹೆಜ್ಜೆ ಅಚಲವಾಗಿದ್ದು ಮಾತ್ರ ಸತ್ಯ. ಕರೋನದ ಕಾರಣ ಶಾಲೆಗಳು ರಜೆ ಇರುವಾಗ ಕೆಲವು ಶಿಕ್ಷಕರಲ್ಲಿ ಶುರುವಾದ ಚರ್ಚೆ- “ಹಾಗಾದರೆ ಈ ರಜೆಯ ಅವಧಿಯನ್ನೇಕೆ ನಾವು ಯೋಗ್ಯ ರೀತಿಯಲ್ಲಿ ಬಳಸಿಕೊಳ್ಳಬಾರದು ಎಂಬುದಾಗಿತ್ತು. ಪರಿಣಾಮ ಬಾಗಲಕೋಟ ಜಿಲ್ಲೆಯ ಮೂಲಕ ಸಮಾಜ ವಿಜ್ಞಾನ  ವಿಷಯಕ್ಕಾಗಿ  ಅತ್ಯುತ್ತಮವಾದ  ಸಂಪನ್ಮೂಲ  ತಯಾರಿಕೆಗಾಗಿ  ಯೋಜನೆಯೊಂದು ಸಿದ್ಧವಾದದ್ದು ಶ್ರೀ‌ ಬಿ ಡಿ ಪಾಟೀಲ ಹಾಗೂ ಶ್ರೀ ಎಲ್ ಡಿ ಮಮದಾಪೂರ ಇವರ ತಲೆಯಲ್ಲಿ, ತಕ್ಷಣ ಕಾರ್ಯ ಪ್ರವೃತ್ತರಾದ ಇವರು ಬಾಗಲಕೋಟ ಜಿಲ್ಲೆಯ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವಾಟ್ಸಪ್ ಗುಂಪುಗಳಲ್ಲಿ “ಡಿಜಿಟಲ್ ಸಂಪನ್ಮೂಲ ತಯಾರಿಕೆಗಾಗಿ ಶಿಕ್ಷಕರು ಕೈ ಜೋಡಿಸುವಿರಾ” ಎಂಬ ಸಂದೇಶ ಹಾಕಿದ್ದೇ ತಡ, ಶ್ರೀ ಮಂಜುನಾಥ ಹಾವರಗಿ, ಶ್ರೀ ಐ ಜಿ ಕಡಿಬಾಗಿಲ, ಶ್ರೀ ಎಂ ಆರ್ ನದಾಫ, ಶ್ರೀ ಡಿ ಬಿ ನದಾಫ, ಶ್ರೀ ಬಿ ಆಯ್ ಹುಲ್ಲೂರ, ಶ್ರೀ ಸಿ ಎಸ್ ಹಳ್ಳೂರ, ಶ್ರೀ ಎಂ ಡಿ ಮಠಪತಿ, ಶ್ರೀ ಎಸ್ ಎಮ್ ದೊಡಮನಿ,  ಶ್ರೀ ಎಸ್ ಬಿ ಹೆಳವರ, ಶ್ರೀ ಎನ್ ಪಿ ಬಿರಾದಾರ, ಶ್ರೀ ಎಸ್ ಎಸ್ ಹಿರೇಮಠ, ಶ್ರೀ ಪಿ ಬಿ ಪಾಟೀಲ, ಶ್ರೀ ಪಿ ಬಿ ಯರಗಟ್ಟಿ ಗುರುಗಳು ಈ ಕಾರ್ಯಕ್ಕೆ ಕೈ ಜೋಡಿಸುವುದಾಗಿ ತಿಳಿಸಿದರು, ಪರಿಣಾಮವಾಗಿ ಸಮಾಜ ವಿಜ್ಞಾನ ಡಿಜಿಟಲ್  ವೇದಿಕೆ ಬಾಗಲಕೋಟೆ” ಹುಟ್ಟಿಕೊಂಡಿತು. ಅದರಂತೆ ಏನು ಮಾಡಿದರೆ ಒಳಿತು ಎಂದು ಆಲೋಚಿಸಲಾಗಿ ಹತ್ತನೇ ತರಗತಿಯ ಎಲ್ಲ ೩೯ ಪಾಠಗಳ ಮೇಲೆ ರಸಪ್ರಶ್ನೆ ತಯಾರಿಸುವ ಬಗ್ಗೆ ನಿರ್ಧಾರ ಮಾಡಿ ಗುಂಪಿನ ‌ಎಲ್ಲ ಸದಸ್ಯರಿಗೂ ಪಾಠಗಳ ಹಂಚಿಕೆಯಾಯಿತು. ತಾಂತ್ರಿಕ ಕಾರ್ಯ ಶ್ರೀ ಬಿ ಡಿ ‌ಪಾಟೀಲರ ಜವಾಬ್ದಾರಿಯಾಯಿತು.

ಹೀಗೆ ಹತ್ತನೇ ತರಗತಿಯ ಎಲ್ಲ ಪಾಠಗಳ ರಸಪ್ರಶ್ನೆಗಳು ತಯಾರಾಗತೊಡಗಿದವು, ಇದರ ಜೊತೆ ಜೊತೆಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಆನ್‍ಲೈನ್‍ ಮೂಲಕ ಪಾಠ ಬೋಧನೆ ಹಾಗೂ ಸಂದೇಹಗಳನ್ನು ಬಗೆಹರಿಸಿ ಅವರಲ್ಲಿ ಆತ್ಮ ಸ್ಥೈರ್ಯ ತುಂಬುವ ಕೆಲಸವೂ ಕೂಡಾ ನಡೆಯಿತು. ರಸಪ್ರಶ್ನೆಗಳೇನೋ ತಯಾರಾದವು ಆದರೆ ಅವುಗಳನ್ನು ಸಮಾಜ ವಿಜ್ಞಾನ ಶಿಕ್ಷಕ ಬಳಗದೊಂದಿಗೆ ಹಂಚಿಕೊಳ್ಳುವುದು ಹಾಗೂ ದೀರ್ಘಕಾಲ ಮುಕ್ತ ಬಳಕೆಗಾಗಿ ಎಲ್ಲ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಒಂದೆಡೆ ಸೇರಿಸುವ ಅಭಿಪ್ರಾಯ ಬಾಗಲಕೋಟ ಜಿಲ್ಲೆಯ ಸಂಪನ್ಮೂಲ ಶಿಕ್ಷಕರ ಅಭಿಪ್ರಾಯವಾಗಿ ಬದಲಾಯಿತು. ಈ ಹೊಸ ಆಲೋಚನೆಗಳ ಫಲಿತಾಂಶವೇ ಈ‌ ನಮ್ಮಬ್ಲಾಗ್!!!!!!!,

ಈ ಬ್ಲಾಗ್ ತಯಾರಿಸುವ ಹೊಣೆಗಾರಿಕೆ ಶ್ರೀ ಬಿ ಆಯ್ ಹುಲ್ಲೂರ, ಶ್ರೀ ಬಿ ಡಿ ಪಾಟೀಲರಿಗೆ ಹಾಗೂ ಭಾವಚಿತ್ರಗಳ ವಿನ್ಯಾಸ ಕಾರ್ಯ ಶ್ರೀ ಎಸ್ ಬಿ ಹೆಳವರ ಅವರಿಗೆ ನಿಡಲಾಯಿತು. ಬ್ಲಾಗ್ ತಯಾರಿಕೆಗೆ ಅವರೇನೋ ಸಿದ್ಧರಾದರು. ಆದರೆ ಆರಂಭಿಕವಾಗಿ ಹಲವಾರು ತೊಡಕುಗಳು, ಅಳುಕುಗಳು ನಮ್ಮನ್ನು ಕಾಡದೇ ಇರಲಿಲ್ಲ, ಸತತವಾಗಿ ಬೆಳಗಿನ ಜಾವದಿಂದ ರಾತ್ರಿ 10 ಗಂಟೆಯವರೆಗೆ ಸುಮಾರು ಎರಡು ವಾರಗಳ ನಿರಂತರ ಶ್ರಮವಹಸಿ, ಊಟ ಉಪಹಾರಗಳ ಯೋಚನೆಯೂ ಇಲ್ಲದೇ ಅತ್ಯದ್ಭುತವಾದ ಬ್ಲಾಗ್ ಸಿದ್ಧಗೊಳಿಸಿದ ಶ್ರೇಯಸ್ಸು ಇವರಿಗೆ ‌ಸಲ್ಲುತ್ತದೆ.

ಇನ್ನೂ ಹಲವಾರು ಸಂಪನ್ಮೂಲಗಳ ತಯಾರಿಕೆ, ಹಂಚಿಕೆ ಹಾಗೂ ಮುಕ್ತ ಬಳಕೆ ನಮ್ಮ ತಂಡದ ಗುರಿಯಾಗಿದೆ. ತಂಡಕ್ಕೆ ಹೊಸ ಸದಸ್ಯರಾಗಿ ಶ್ರೀ ಜಗದೀಶ ಬಾರಕೇರ, ಶ್ರೀ ಎಂ ಎಂ ಹದಲಿ, ಶ್ರೀ ಎಂ ಎಂ ಮುನವಳ್ಳಿ, ಶ್ರೀ ವಿವೇಕಾನಂದ ಭಜಂತ್ರಿ, ಶ್ರೀ ಕೆ ಎಚ್ ಹಂಚಿನಾಳ, ಶ್ರೀ ಎಸ್ ಎಸ್ ವಿಕ್ರಂ, ಶ್ರೀ ಎಸ್ ಎಸ್ ಸಾರಂಗಮಠ ರವರ ಸೇರ್ಪಡೆ ನಮ್ಮ‌ ಶಕ್ತಿಯನ್ನು ನೂರ್ಮಡಿಗೊಳಿಸಿದೆ. ಇವರು ನಮ್ಮ ತಂಡ ಸೇರಿದ ನಂತರ 8 ಹಾಗೂ 9ನೇ ತರಗತಿಯ‌ ರಸಪ್ರಶ್ನೆಗಳ ತಯಾರಿಕೆಗೆ ‌ನಾಂದಿ ಹಾಡಲಾಯಿತು.

ಬ್ಲಾಗ್ ರಚನೆಗೆ ಪ್ರೋತ್ಸಾಹಿಸಿ ಸಹಕಾರ ನೀಡಿದ ಶ್ರೀ ರವಿ ಆಹೇರಿ ಹಾಗೂ ಶ್ರೀ ವಸಂತ ಶ್ಯಾಗೋಟಿ ಗುರುಗಳಿಗೂ ಅನಂತ ವಂದನೆಗಳು. ನಮ್ಮ ಸಮಾಜ ವಿಜ್ಞಾನ ಬಳಗವನ್ನು ಸದಾ ಹೊಸ ತುಡಿತಕ್ಕೆ ಹಾತೊರೆಯುವಂತೆ ನಿರಂತರ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಪ್ರೋತ್ಸಾಹಿಸುತ್ತಿರುವ ನಮ್ಮ ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕರಾದ ಶ್ರೀ ಡಿ ಎಂ ಯಾವಗಲ್ ಹಾಗೂ ಮಾನ್ಯ ಉಪನಿರ್ದೇಶಕರಾದ ಶ್ರೀ ಶ್ರೀಶೈಲ ಬಿರಾದಾರ ರವರಿಗೂ ನಮ್ಮ ವೇದಿಕೆಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇವೆ.

ಸಾಧನೆಯ ‌ಹಾದಿಯಲ್ಲಿ ಮನುಷ್ಯ ಅಲ್ಪತೃಪ್ತನಾಗಿರಬಾರದಂತೆ ಹಾಗಾಗಿ ‌ನಮ್ಮಿಂದ ಇನ್ನೂ ಏನನ್ನು ಕೊಡಲು ಸಾಧ್ಯವೋ ಆ ಎಲ್ಲ ಪ್ರಯತ್ನಗಳಿಗೂ ನಾವು ಸಿದ್ಧರಿದ್ದೇವೆ, ಸುಮಾರು ಇಪ್ಪತೈದು ಜನ ಸಂಪನ್ಮೂಲ ವ್ಯಕ್ತಿಗಳ ಬಾಗಲಕೋಟೆಯ ಈ ತಂಡ ಮುಂದಿನ ದಿನಗಳಲ್ಲಿ ಸಮಾಜ ವಿಜ್ಞಾನ ವಿಷಯವನ್ನು ಶ್ರೀಮಂತಗೊಳಿಸಲು ಅವಿರತ ಕಾರ್ಯನಿರ್ವಹಸಲು ಸಿದ್ಧವಾಗಿದೆ. ಇದಕ್ಕೆ ಬಾಗಲಕೋಟೆ ಜಿಲ್ಲೆಯ ಅಷ್ಟೇ ಅಲ್ಲದೇ ರಾಜ್ಯದ ಎಲ್ಲ ಸಮಾಜ ವಿಜ್ಞಾನ ವಿಷಯ ಶಿಕ್ಷಕ ಬಳಗವೂ ಸಹಕಾರ ನೀಡಲಿ ಹಾಗೂ ನಮ್ಮ‌ ಕಾರ್ಯಕ್ಕೆ ಬೆನ್ನೆಲುಬಾಗಿ ನಿಲ್ಲಲಿ ಎಂಬ ಆಶಯ ನಮ್ಮ ಬಾಗಲಕೋಟೆ ಸಮಾಜ ವಿಜ್ಞಾನ ಡಿಜಿಟಲ್ ವೇದಿಕೆಯ ‌ಅಪೇಕ್ಷೆ.

                          

                                       ಸಮಾಜ ವಿಜ್ಞಾನ ಡಿಜಿಟಲ್ ವೇದಿಕೆ, ಬಾಗಲಕೋಟ

20 comments:

  1. good leadership and teamwork go ahead.

    ReplyDelete
  2. Your step towards this innovative project is worth appreciation sir..! Congratulations and best wishes to the group..��..May this step leave footprints and inspire everyone to invent innovative ideas and techniques, to make teaching and learning more effective..

    ReplyDelete
  3. ಸುಪರ್ ಸರ್. ಧನ್ಯವಾದಗಳು

    ReplyDelete
  4. I'm really appreciate your team work.This is very helpful to teachers and also students. so thanks all of you

    ReplyDelete
  5. ನಿಮ್ಮ ಪ್ರಯತ್ನಕ್ಕೆ ಹಾರ್ದಿಕ ಅಭಿನಂದನೆಗಳು ಸ್ನೇಹಿತರೇ, ಇಂತಹ ವೇದಿಕೆ ಇತರ ವಿಷಯಗಳಿಗೆ ಸ್ಫೂರ್ತಿದಾಯಕ ಮತ್ತು ಮಾರ್ಗದರ್ಶಿ...

    ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ,ಗುರಿಯತ್ತ ಪಯಣ ಸದಾ ಸಾಗುತ್ತಿರಲಿ.
    ನಿಮ್ಮ ಅಭಿಮಾನಿಗಳು ನಾವು.

    ನಮ್ಮೆಲ್ಲ ಸಿಬ್ಬಂದಿಯ ಪರವಾಗಿ
    ಮಹಾಂತೇಶ ಕೋಟಿ
    ಸ. ಪ್ರೌ. ಶಾ. ಚಿಕ್ಕ ಶೆಲ್ಲಿಕೆರಿ.

    ReplyDelete
  6. ದಿಟ್ಟ ಹೆಜ್ಜೆ. ಉತ್ತಮ ಗುರಿ. ನಿರಂತರ ಪ್ರಯತ್ನ. ಜಯ ಗ್ಯಾರಂಟಿ. ಪ್ರಯತ್ನಕ್ಕೆ ನಮನಗಳು. ಶುಭವಾಗಲಿ.

    ReplyDelete
  7. ಅತ್ಯುತ್ತಮ ಹಾಗೆ ಅತ್ಯದ್ಭುತ ಕಾರ್ಯ ಸರ್.ನೀವೆಲ್ಲರೂ ಕೈಗೊಂಡ ಈ ಮಾದರಿ ಇತರೆ ಜಿಲ್ಲೆಗೆ ಸ್ಪೂರ್ತಿ....ತುಂಬಾ ಖುಷಿ ಆತ್ರಿ ಸರ್ ನೋಡಿ.

    ಸಂಪರ್ಕ ಸಂಖ್ಯೆ ಕೊಡಿ ಸರ್.‌ಮಾತಾಡಬೇಕೆನಿಸಿತು.

    ನನ್ನ ನಂಬರ್
    7337653589

    ReplyDelete
  8. Really good sir thank you so much for your help

    ReplyDelete